ಕೋಟಿಗಾನಹಳ್ಳಿ ರಾಮಯ್ಯ ಮತ್ತು ರಾಜ್ ಬಿ ಶೆಟ್ಟಿ ಅವರಿಂದ ಲೋಕಾರ್ಪಣೆಯಾಯ್ತು `ಬ್ಯಾಟೆಮರ` ಪುಸ್ತಕ
Posted date: 03 Fri, Nov 2023 11:44:03 AM
ಬರಹಗಾರನಾಗಿ ಗುರುತಿಸಿಕೊಂಡಿರುವ ಎ ಎಸ್ ಜಿ ಮೊದಲ ಕಥಾಸಂಕಲನವನ್ನು ಕೋಟಿಗಾನಹಳ್ಳಿ ರಾಮಯ್ಯ ಮತ್ತು ರಾಜ್ ಬಿ ಶೆಟ್ಟಿ ಅವರು ಬಿಡುಗಡೆ ಮಾಡಿದ್ದಾರೆ. ಬೆಂಗಳೂರಿನ ಕಲಾಗ್ರಾಮದ ಸಂಭಾಗಣದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ನಟರಾಜ್ ಬುದಾಳ್, ಜಯತೀರ್ಥ ಹಾಗೂ ದಯಾ ಗಂಗನಘಟ್ಟ ವಿಶೇಷ ಅತಿಥಿಗಳಾಗಿ ಆಗಮಿಸಿ ಎ ಎಸ್ ಜಿ ಪುಸ್ತಕ ಪ್ರೀತಿಗೆ ಜೊತೆಯಾದರು.

ಮೂಲತಃ ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನ ಆಲದಹಳ್ಳಿಯವರಾದ ಎ ಎಸ್ ಜಿ ತನ್ನ ಸುತ್ತಮುತ್ತಲಿನ ಕತೆಗಳನ್ನು ಅಕ್ಷರ ರೂಪಕ್ಕಿಳಿಸಿ ತಯಾರಿಸಿರುವ ಗ್ರಾಮೀಣ ಸೊಗಡಿನ ಕಥೆಗಳ ಗುಚ್ಛವೇ ಬ್ಯಾಟೆಮರ. ಎ ಎಸ್ ಜಿ ಅವರ ಈ ಪುಸ್ತಕ ಪ್ರೀತಿಗೆ ಕಾರಣ ಸಿನಿಮಾರಂಗ..

ಸಿನಿಮಾವನ್ನೇ ಉಸಿರಾಗಿಸಿಕೊಂಡು ಸಿನಿಮಾಕ್ಕಾಗಿ ತುಡಿಯುತ್ತಿರುವ ಎ ಎಸ್ ಜಿ ನಿರ್ದೇಶಕರಾಗಿ ಸ್ಯಾಂಡಲ್ ವುಡ್ ಗೆ ಹೆಜ್ಜೆ ಇಡುವ ಹುಮ್ಮಸ್ಸಿನಲ್ಲಿದ್ದಾರೆ. ಅದಕ್ಕಾಗಿ ತಮ್ಮಲ್ಲಿನ ಪುಸ್ತಕ ಪ್ರೀತಿಯನ್ನು ತೆರೆದಿಟ್ಟಿದ್ದಾರೆ. ನನ್ನ ಪ್ರಕಾರ, ಸಾಹೇಬ, ತೂತುಮಡಿಕೆ, ಒಂದ್ ಕಥೆ ಹೇಳ್ಲಾ ಸಿನಿಮಾಗಳಿಗೆ ಬರಹಗಾರರಾಗಿ ಕೆಲಸ ಮಾಡಿರುವ ಎ ಎಸ್ ಜಿ ಡೈರೆಕ್ಟರ್ ಕ್ಯಾಪ್ ತೊಡ್ತಿದ್ದಾರೆ. ಈಗಾಗಲೇ ಕಥೆ ಸಿದ್ಧ ಮಾಡಿಕೊಂಡು ನಿರ್ಮಾಪಕರ ಹುಡುಕಾಟದಲ್ಲಿ ತೊಡಗಿದ್ದಾರೆ. ಕಳೆದ ಏಳೆಂಟು ವರ್ಷಗಳಿಂದ ಬರಹಗಾರನಾಗಿ ಅನುಭವವಿರುವ ಎ ಎಸ್ ಜಿ ತಮ್ಮ ಇಷ್ಟು ವರ್ಷದ ಪರಿಶ್ರಮವೆಲ್ಲವನ್ನೂ ಹಾಕಿ ಸಿನಿಮಾ ನಿರ್ದೇಶನಕ್ಕಿಳಿಯುತ್ತಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed